2 ಪೇತ್ರನು 3 : 1 (KNV)
ಪ್ರಿಯರೇ, ನಿಮಗೀಗ ಬರೆಯುವದು ಎರಡನೆಯ ಪತ್ರಿಕೆ. ಈ ಎರಡು ಪತ್ರಿಕೆ ಗಳಲ್ಲಿಯೂ ಜ್ಞಾಪಕಕೊಟ್ಟು ನಿಮ್ಮ ನಿರ್ಮಲವಾದ ಮನಸ್ಸನ್ನು ಪ್ರೇರಿಸಿದ್ದೇನೆ.
2 ಪೇತ್ರನು 3 : 2 (KNV)
ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ಅಪೊಸ್ತಲರಾದ ನಮ್ಮ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕ ಮಾಡಿಕೊಳ್ಳಬೇಕು.
2 ಪೇತ್ರನು 3 : 3 (KNV)
ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು--
2 ಪೇತ್ರನು 3 : 4 (KNV)
ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆ ಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳ ಬೇಕು.
2 ಪೇತ್ರನು 3 : 5 (KNV)
ಅವರು ಇದನ್ನು ಬೇಕೆಂದು ತಿಳಿಯಲಾರರು; ಅದೇನಂದರೆ ಪೂರ್ವದಲ್ಲಿದ್ದ ಆಕಾಶಗಳೂ ನೀರಿನ ಹೊರಗೆ ಮತ್ತು ನೀರಿನ ಒಳಗೆ ನಿಂತಿರುವ ಭೂಮಿಯೂ ದೇವರ ವಾಕ್ಯದಿಂದ ಉಂಟಾಗಿ
2 ಪೇತ್ರನು 3 : 6 (KNV)
ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಳಯದಲ್ಲಿ ನಾಶ ವಾಯಿತು.
2 ಪೇತ್ರನು 3 : 7 (KNV)
ಆದರೆ ಈಗಿನ ಆಕಾಶಗಳೂ ಭೂಮಿಯೂ ಅದೇ ವಾಕ್ಯದಿಂದ ಭದ್ರವಾಗಿ ಇಡಲ್ಪಟ್ಟಿದ್ದು ನ್ಯಾಯ ತೀರ್ವಿಕೆಯ ದಿನದವರೆಗೂ ಭಕ್ತಿಹೀನರ ನಾಶನಕ್ಕಾಗಿ ಬೆಂಕಿಯು ಕಾದಿಡಲ್ಪಟ್ಟಿದೆ ಎಂಬದು.
2 ಪೇತ್ರನು 3 : 8 (KNV)
ಆದರೆ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ತಿಳಿಯದವರಾಗಿರಬೇಡಿರಿ.
2 ಪೇತ್ರನು 3 : 9 (KNV)
ಕರ್ತನು ತನ್ನ ವಾಗ್ದಾನದ ವಿಷಯವಾಗಿ ತಡಮಾಡುತ್ತಾನೆಂಬದಾಗಿ ಕೆಲವರು ಎಣಿಸುವ ಪ್ರಕಾರ ಆತನು ತಡಮಾಡುವಾತನಲ್ಲ. ಆದರೆ ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಮ್ಮ ಕಡೆಗೆ ದೀರ್ಘಶಾಂತಿ ಯುಳ್ಳವ
2 ಪೇತ್ರನು 3 : 10 (KNV)
ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು.
2 ಪೇತ್ರನು 3 : 11 (KNV)
ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದ ರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.
2 ಪೇತ್ರನು 3 : 12 (KNV)
ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
2 ಪೇತ್ರನು 3 : 13 (KNV)
ಆದಾಗ್ಯೂ ನಾವು ಆತನ ವಾಗ್ದಾನದ ಪ್ರಕಾರ ನೂತನ ಆಕಾಶ ಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.
2 ಪೇತ್ರನು 3 : 14 (KNV)
ಆದಕಾರಣ ಪ್ರಿಯರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವದರಿಂದ ಸಮಾಧಾನ ದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವ ರಾಗಿರ್ರಿ.
2 ಪೇತ್ರನು 3 : 15 (KNV)
ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದನು.
2 ಪೇತ್ರನು 3 : 16 (KNV)
ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯ ಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಿಕೆಗಳಲ್ಲಿರುವ ಕೆಲವು ವಿಷಯಗಳು ತಿಳಿಯುವದಕ್ಕೆ ಕಷ್ಟವಾಗಿವೆ. ವಿದ್ಯಾಹೀನರೂ ಚಪಲಚಿತ್ತರೂ ಮಿಕ್ಕಾದ ಬರಹಗಳಿಗೆ ಸಹ ತಪ್ಪಾದ ಅರ್ಥಮಾಡಿಕೊಂಡ ಹಾಗೆಯೇ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತವ
2 ಪೇತ್ರನು 3 : 17 (KNV)
ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವದರಿಂದ ದುಷ್ಟರ ತಪ್ಪಿನಂತೆ ನಡಿಸ ಲ್ಪಟ್ಟು ನಿಮ್ಮ ಸ್ಥಿರಮನಸ್ಸನ್ನು ಬಿಟ್ಟು ಭ್ರಷ್ಠರಾಗದಂತೆ ಎಚ್ಚರಿಕೆಯಾಗಿರ್ರಿ.
2 ಪೇತ್ರನು 3 : 18 (KNV)
ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆ ಇರಲಿ. ಆಮೆನ್.

1 2 3 4 5 6 7 8 9 10 11 12 13 14 15 16 17 18